ಮಕ್ಕಳನ್ನು ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅವರಿಂದ ಇನ್ನಷ್ಟು ಉನ್ನತ ಸಾಧನೆ ನಿರೀಕ್ಷೆ ಮಾಡಲು ಸಾಧ್ಯ-ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಚ್. ಆರ್. ರವಿಕುಮಾರ್

ಮಕ್ಕಳನ್ನು ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅವರಿಂದ ಇನ್ನಷ್ಟು ಉನ್ನತ ಸಾಧನೆ ನಿರೀಕ್ಷೆ ಮಾಡಲು ಸಾಧ್ಯ-ಸಾಗರ ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಚ್. ಆರ್. ರವಿಕುಮಾರ್ 

ಸಾಗರ : ಸಮಾಜದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅವರಿಂದ ಇನ್ನಷ್ಟು ಉನ್ನತ ಸಾಧನೆ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಾಂತ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ರವಿಕುಮಾರ್ ಸಿಗಂದೂರು ತಿಳಿಸಿದರು.

ಇಲ್ಲಿನ ಈಡಿಗರ ಸಭಾಭವನದಲ್ಲಿ ಭಾನುವಾರ ಸಾಗರ ಪ್ರಾಂತ್ಯ ಅರ್ಯ ಈಡಿಗರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಸಮುದಾಯದಲ್ಲಿ ಹಿಂದೆ ಅಕ್ಷರಸ್ತರ ಸಂಖ್ಯೆ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸ್ವಯಂ ಪ್ರಯತ್ನದಿಂದ ಸಮುದಾಯ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನದಲ್ಲಿ ನೋಡುವ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವುದರಿಂದ ಅದು ಇನ್ನೊಬ್ಬರಿಗೆ ಉತ್ತೇಜನ ನೀಡಿದಂತೆ ಅಗುತ್ತದೆ ಎಂದರು.

ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರು ಇದ್ದಾರೆ. ಸಮುದಾಯದ ಅಭಿವೃದ್ದಿಗೆ ಅವರು ಕೊಡುಗೆ ನೀಡುವ ಮೂಲಕ ಸಮಷ್ಟಿ ಸಮಾಜದ ಅಭಿವೃದ್ದಿಗೂ ತಮ್ಮ ಕೊಡುಗೆ ನೀಡಿದ್ದಾರೆ ಅವರನ್ನು ಸನ್ಮಾನಿಸಲಾಗಿದೆ. ವಿಶೇಷವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿ 150ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆಗೆ ಒಳಪಟ್ಟಿದ್ದಾರೆ. ಒಟ್ಟಾರೆ ಸಂಘವು ವಿವಿಧ ಕಾರ್ಯಕ್ರಮಗಳ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. 

ವೇದಿಕೆಯಲ್ಲಿಪರಮೇಶ್ವರ ಟಿ., ಶಿವಪ್ಪ, ಟಿ.ವಿ.ಪಾಂಡುರಂಗ, ತಾರಾಮೂರ್ತಿ, ಕೆ.ಎಂ. ಕರುಣಾಕರ, ಬಿ.ಎಂ. ಮಂಜಪ್ಪ, ಕೆ.ಹೊಳೆಯಪ್ಪ, ಗಿರೀಶ್ ಕೋವಿ, ಮಹಾಬಲ ಕೌತಿ, ವೆಂಕಟೇಶ ಗಲ್ಲಿ, ಅಶೋಕ ಬೇಳೂರು, ಅದರಂತೆ ನಾರಾಯಣಪ್ಪ, ಡಾ. ರಾಜನಂದಿನಿ ಕಾಗೋಡು, ವಿಶ್ವನಾಥ ಕುಗ್ವೆ, ಡಿ.ಗಣಪತಪ್ಪ, ತುಕಾರಾಮ ಶಿರವಾಳ, ಕಿರಣ್ ದೊಡ್ಮನೆ ಇನ್ನಿತರರು ಹಾಜರಿದ್ದರು. 

ಸತೀಶ್ ನಾಯಕ್ ಪ್ರಾರ್ಥಿಸಿದರು. ಆನಂದ ಭೀಮನೇರಿ ಸ್ವಾಗತಿಸಿದರು. ಕಲಸೆ ಶಿವಪ್ಪ ಪ್ರಾಸ್ತಾವಿಕ ಮಾತನಾಡಿದರು.

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ