ಹೊಸದಾಗಿ ಲೇಔಟ್ ಮಾಡುವವರು ಸರ್ಕಾರದ ಕಾನೂನಿನಂತೆ ಮಾಡಬೇಕು-ಶಾಸಕ ಗೋಪಾಲಕೃಷ್ಣ ಬೇಳೂರು

ಹೊಸದಾಗಿ ಲೇಔಟ್ ಮಾಡುವವರು ಸರ್ಕಾರದ ಕಾನೂನಿನಂತೆ ಮಾಡಬೇಕು-ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ನಗರವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಸಿ.ಎ. ಸೈಟ್‌ಗಳನ್ನು ಗುರುತಿಸಿದ್ದು ಅವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಾಗುತ್ತದೆ. ನಗರಸಭೆ ವಶದಲ್ಲಿದ್ದ ಸಿಎ ನಿವೇಶನಗಳನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗುತ್ತದೆ ಎಂದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ನಗರಸಭೆಯಲ್ಲಿ ಗುರುವಾರ ನಗರಾಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿದ ಅವರು, ಲೇಔಟ್ ಮಾಡುವವರು ಸರ್ಕಾರಕ್ಕೆ ನಿವೇಶನ ಕೊಡುವಾಗ ಮುಂಭಾಗದಲ್ಲಿ ಇರುವುದನ್ನು ಕೊಟ್ಟರೆ ಅಲ್ಲಿ ಉದ್ಯಾನವನ ಸೇರಿದಂತೆ ಬೇರೆಬೇರೆ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೊಸದಾಗಿ ಲೇಔಟ್ ಮಾಡುವವರು ಸರ್ಕಾರದ ಕಾನೂನಿನಂತೆ ಮಾಡಬೇಕು. ಲೇಔಠ್‌ಗೆ ಪರವಾನಗಿ ನೀಡುವುದಕ್ಕಿಂತ ಮೊದಲು ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರವಾನಿಗೆ ನೀಡಲಾಗುತ್ತದೆ. ಪ್ರಾಧಿಕಾರದಿಂದ 28 ಬಾವಿಗಳ ರಿಪೇರಿಗೆ ಹಣ ನೀಡಲಾಗಿದೆ. ಬೈಪಾಸ್ ರಸ್ತೆ ನಿರ್ಮಾಣಕ್ಕೂ ನಮ್ಮಲ್ಲಿ ಅವಕಾಶವಿದ್ದು ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಾಧಿಕಾರದ ಸದಸ್ಯರಾದ ಸೋಮಶೇಖರ ಲ್ಯಾವಿಗೆರೆ, ಐ.ಎನ್.ಸುರೇಶಬಾಬು, ಮರಿಯಾ ಲೀಮಾ, ರವಿಕುಮಾರ್ ಲಿಂಗನಮಕ್ಕಿ ಇನ್ನಿತರರು ಹಾಜರಿದ್ದರು.

ಸುದ್ದಿ  ಮತ್ತು ಜಾಹೀರಾತು ನೀಡಲು- 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ