ಖಾಸಗಿ ವಿಶ್ವವಿದ್ಯಾಲಯಗಳನ್ನು ಲಾಭಕ್ಕಾಗಿ ನಡೆಸುವಂತಿಲ್ಲ: ಸುಪ್ರೀಂ ಕೋರ್ಟ್

ಖಾಸಗಿ ವಿಶ್ವವಿದ್ಯಾಲಯಗಳನ್ನು ಲಾಭಕ್ಕಾಗಿ ನಡೆಸುವಂತಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಖಾಸಗಿ ವಿಶ್ವವಿದ್ಯಾಲಯಗಳು ಶಿಕ್ಷಣದ ವಿಶಾಲ ಸಾರ್ವಜನಿಕ ಉದ್ದೇಶವನ್ನು ಪೂರೈಸಬೇಕೇ ಹೊರತು ಲಾಭಕ್ಕಾಗಿ ಕೆಲಸ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಅದೇ ವೇಳೆ, ವಿಶ್ವವಿದ್ಯಾಲಯಗಳ ಹೆಚ್ಚುವರಿ ಆದಾಯ, ವೆಚ್ಚ, ಶುಲ್ಕ ಸಂಗ್ರಹ ಮತ್ತು ನೌಕರರ ವೇತನಗಳ ವಿವರಗಳನ್ನೊಳಗೊಂಡ ಲೆಕ್ಕಪರಿಶೋಧನಾ ವರದಿ ಹಾಗೂ ಪ್ರವೇಶ ಪ್ರಕ್ರಿಯೆ, ನೇಮಕಾತಿ ಮತ್ತು ಬೋಧನಾ ಗುಣಮಟ್ಟದ ಕುರಿತಾದ ವಿವರಗಳನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

‘‘ವ್ಯವಸ್ಥೆಯು ಕೆಲಸ ಮಾಡುವುದು, ಅದರಲ್ಲೂ ಮುಖ್ಯವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ಸಾರ್ವಜನಿಕರ ಒಳಿತಿಗಾಗಿ. ಯಾವುದೇ ಖಾಸಗಿ ವಿಶ್ವವಿದ್ಯಾಲಯವನ್ನು ಲಾಭ ಗಳಿಸುವ ಸಂಸ್ಥೆಯಾಗಿ ನಡೆಸಬಾರದು ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಇದು ಶಿಕ್ಷಣದ ವಿಶಾಲ ಸಾರ್ವಜನಿಕ ಉದ್ದೇಶವನ್ನು ಪೂರೈಸಬೇಕು’’ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎನ್.ವಿ. ಅಂಜಾರಿಯ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

ಜೊತೆಗೆ, ನ್ಯಾಯಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕಾದ ಹಲವು ನಿರ್ದೇಶನಗಳನ್ನು ಹೊರಡಿಸಿತು

ಕಾಲೇಜು ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಬೇಕೆಂದು ಕೋರಿದ್ದಕ್ಕಾಗಿ ಆಮಿಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬರಿಗೆ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಆದೇಶಗಳನ್ನು ಹೊರಡಿಸಲಾಗಿದೆ.

ಕಳೆದ ವರ್ಷ ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯವು, 2025 ನವೆಂಬರ್‌ನಲ್ಲಿ ಮಹತ್ವದ ಆದೇಶಗಳನ್ನು ಹೊರಡಿಸಿತ್ತು. ವಿಶ್ವವಿದ್ಯಾಲಯಗಳನ್ನು ಹೇಗೆ ಸ್ಥಾಪಿಸಲಾಯಿತು, ಅವುಗಳಿಗೆ ಒದಗಿಸಲಾಗಿರುವ ಸೌಲಭ್ಯಗಳು ಹಾಗೂ ಅವುಗಳು ‘ಲಾಭವೂ ಇಲ್ಲ- ನಷ್ಟವೂ ಇಲ್ಲ’ ಎಂಬ ತತ್ವದಡಿ ನಡೆಯುವಂತೆ ನೋಡಿಕೊಳ್ಳಲು ರೂಪಿಸಲಾಗಿರುವ ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು.

ಗುರುವಾರ ಮತ್ತಷ್ಟು ಆದೇಶಗಳನ್ನು ನೀಡುವ ಅಗತ್ಯವನ್ನು ಮನಗಂಡ ನ್ಯಾಯಾಲಯ, ‘‘ಈ ಸಂಸ್ಥೆಗಳು ಕೇವಲ ಲಾಭ ಗಳಿಸುವ ಉದ್ಯಮದಂತೆ ಕಾರ್ಯಾಚರಿಸಲು ಬಿಡಲಾಗದು’’ ಎಂದು ಹೇಳಿತು.

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ