ಸಾಗರ ನಗರಸಭೆಯ ಪೌರಸೇವಾ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಚೆಲುವ ವಿ.

ಸಾಗರ ನಗರಸಭೆಯ ಪೌರಸೇವಾ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಚೆಲುವ ವಿ.

ಸಾಗರ : ಸಾಗರ ನಗರಸಭೆಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಚೆಲುವ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಗರ ನಗರಸಭೆಯ ಪೌರಾಯುಕ್ತಾರಾದ ಎಚ್. ಕೆ. ನಾಗಪ್ಪನವರ ಉಪಸ್ಥಿತಿಯಲ್ಲಿ ಇಂದು ಸಭೆ ಸೇರಿದ ನಗರಸಭೆಯ ಪೌರ ಸೇವಾ ನೌಕರರು ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು.

ಉಪಾಧ್ಯಕ್ಷರಾಗಿ ಕಂದಾಯ ಅಧಿಕಾರಿಗಳಾದ ಮಮತಾ ಎಸ್ ಮತ್ತು ಹರೀಶ್ ರವರು ಆಯ್ಕೆಯಾಗಿದ್ದು ಸಂಘದ ಕಾರ್ಯದರ್ಶಿಯಾಗಿ ವಿಠಲ ಹೆಗಡೆ ಮತ್ತು ಖಜಾಂಚಿಯಾಗಿ ಸಚಿನ್ ರವರು ಎಲ್ಲರ ಅಪೇಕ್ಷೆಯಂತೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ರಾಜಕುಮಾರ್ ಮದನ್, ಬಾಲಚಂದ್ರ, ಶೈಲೇಶ್ ರಾಜೇಶ್, ಮಾರತಮ್ಮ ಹಾಗೂ ಇನ್ನಿತರ ಪೌರ ನೌಕರರು ಹಾಜರಿದ್ದರು 

ನೂತನ ಪದಾಧಿಕಾರಿಗಳ ಸಮಿತಿಗೆ ಮೂರನೇಕಣ್ಣು ನ್ಯೂಸ್, ಸಾಗರ ಬಳಗ ಶುಭ ಕೋರುತ್ತದೆ.

ನೂತನ ಅಧ್ಯಕ್ಷರಾದ ಚೆಲುವ ಇವರು ಮೃದು ಸ್ವಭಾವದ ವ್ಯಕ್ತಿಯಾಗಿದ್ದು ನಗರಸಭೆಯ ನೌಕರರು ಮತ್ತು ಅಲ್ಲಿಗೆ ಬರುವ ನಾಗರೀಕರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿರುವ ವ್ಯಕ್ತಿ ಆಗಿದ್ದಾರೆ.


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ