ಶಿಕ್ಷಣ ನಿಮ್ಮ ಎಲ್ಲ ನೋವುಗಳನ್ನು ಮರೆಸಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವ ಸಾಧನವಾಗಿದೆ-ಶಾಸಕ ಗೋಪಾಲಕೃಷ್ಣ ಬೇಳೂರು
ಶಿಕ್ಷಣ ನಿಮ್ಮ ಎಲ್ಲ ನೋವುಗಳನ್ನು ಮರೆಸಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವ ಸಾಧನವಾಗಿದೆ-ಶಾಸಕ ಗೋಪಾಲಕೃಷ್ಣ ಬೇಳೂರು
ಶಾಸಕರ ಮಾರ್ಗದರ್ಶನ, ಕಾಲೇಜು ಅಭಿವೃದ್ದಿ ಸಮಿತಿ ಸಹಕಾರದಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದೆ-ಜಿ. ಪರಮೇಶ್ವರಪ್ಪ
ಸಾಗರ : ಹದಿಹರೆಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ಎದೆಗುಂದ ಬೇಡಿ. ಪೋಷಕರು, ಸಮಾಜ, ಶಿಕ್ಷಣ ಸಂಸ್ಥೆಗಳು ನಿಮ್ಮ ಜೊತೆಗೆ ಇರುತ್ತದೆ. ಶಿಕ್ಷಣ ನಿಮ್ಮ ಎಲ್ಲ ನೋವುಗಳನ್ನು ಮರೆಸಿ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವ ಸಾಧನವಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ವಿವಿಧ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಣ್ಣಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು ಮನಸ್ಸಿಗೆ ತೀರ ನೋವು ತರುತ್ತದೆ. ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೆöÊರ್ಯ ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೋಷಕರು ಅನೇಕ ಕನಸುಗಳನ್ನು ಇರಿಸಿಕೊಂಡು ನಿಮ್ಮನ್ನು ಕಾಲೇಜಿಗೆ ಕಳಿಸಿರುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಲಿ ಕೆಲಸ ಮಾಡುವ ಜೊತೆಗೆ ಸಾಲ ಸಹ ಮಾಡಿರುತ್ತಾರೆ. ಅವರ ಕನಸು ಕನಸಾಗಿಯೆ ಉಳಿಯಬಾರದು. ನಿಮ್ಮ ನಿರಂತರ ಓದು ಅವರ ಕನಸು ನನಸು ಮಾಡಲು ಸಾಧ್ಯ. ಸಣ್ಣಪುಟ್ಟ ಪರಿಸ್ಥಿತಿಯನ್ನು ನೀವು ನಿಭಾಯಿಸಿದರೇ ಭವಿಷ್ಯದಲ್ಲಿ ಬರುವ ದೊಡ್ಡ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತೀರಿ. ಒಂದು ಕಾಲದಲ್ಲಿ ಜ್ಯೂನಿಯರ್ ಕಾಲೇಜು ಎಂದರೆ ಮೂಗು ಮುರಿಯುತ್ತಿದ್ದರು. ಇದೀಗ 2600 ವಿದ್ಯಾರ್ಥಿಗಳನ್ನು ಹೊಂದಿದ್ದು ರಾಜ್ಯದಲ್ಲಿಯೆ ಅತಿದೊಡ್ಡ ಕಾಲೇಜು ಎನ್ನುವ ಹೆಗ್ಗಳಿಕೆ ಜೊತೆಗೆ ಉತ್ತಮ ಫಲಿತಾಂಶ ಬರುತ್ತಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಿ. ಪರಮೇಶ್ವರಪ್ಪ, ಶಾಸಕರ ಮಾರ್ಗದರ್ಶನ, ಕಾಲೇಜು ಅಭಿವೃದ್ದಿ ಸಮಿತಿ ಸಹಕಾರದಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಈ ವರ್ಷ 2600 ಮಕ್ಕಳು ಓದುತ್ತಿದ್ದು ಕಳೆದ ವರ್ಷಕ್ಕಿಂತ 200 ಮಕ್ಕಳು ಹೆಚ್ಚಿಗೆ ಪ್ರವೇಶ ಪಡೆದಿದ್ದಾರೆ. ಜೊತೆಗೆ 170ಕ್ಕೂ ಹೆಚ್ಚು ರ‍್ಯಾಂಕ್ ಕಳೆದ ವರ್ಷ ಬಂದಿದ್ದು ಈ ವರ್ಷ ಹೆಚ್ಚಿನ ರ‍್ಯಾಂಕ್ ನಿರೀಕ್ಷೆ ಹೊಂದಲಾಗಿದೆ. ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸ್ಮಾರ್ಟ್ ಬೋರ್ಡ್ಗಳಿದ್ದು, ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಸ್ಮಾರ್ಟ್ ಬೊರ್ಡ್ ಅವಶಕ್ಯತೆ ಇದೆ ಎಂದರು.
ವೇದಿಕೆಯಲ್ಲಿ ಡಾ. ಬೆನಕ ಪ್ರಸಾದ್, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ಪ್ರಮುಖರಾದ ಉಮೇಶ್, ಲೋಕೇಶ್, ಭವ್ಯ, ಬಸವರಾಜ್ ಸಿ. (ಫ್ಲವರ್ಸ ಬಸವರಾಜ್) ಸಲೀಂ ಯೂಸೂಫ್ ಇನ್ನಿತರರು ಹಾಜರಿದ್ದರು. ಶ್ರೀನಿಧಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಲಕ್ಷ್ಮಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಬಂಗಾರಪ್ಪ ಎಂ.ಸ್ವಾಗತಿಸಿದರು. ಸತೀಶ್ ಕೆ.ಎಸ್. ವಂದಿಸಿದರು. ಸೀತಾರಾಮ ಪಟಗಾರ್ ನಿರೂಪಿಸಿದರು.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ




Comments
Post a Comment