ಶಾಸಕ ಗೋಪಾಲಕೃಷ್ಣ ಬೇಳೂರು ಶಿಕ್ಷಕ ಸಮೂಹಕ್ಕೆ ಬೇಷರತ್ತು ಕ್ಷಮೆಯಾಚನೆ ಮಾಡಬೇಕು - ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ

ಶಾಸಕ ಗೋಪಾಲಕೃಷ್ಣ ಬೇಳೂರು ಶಿಕ್ಷಕ ಸಮೂಹಕ್ಕೆ ಬೇಷರತ್ತು ಕ್ಷಮೆಯಾಚನೆ  ಮಾಡಬೇಕು - ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ

ಸಾಗರ : ಕ್ಷೇತ್ರವ್ಯಾಪ್ತಿಯಲ್ಲೆ ಇದ್ದು ಶಿಕ್ಷಕ ದಿನಾಚರಣೆಗೆ ಗೈರಾಗಿರುವ ಶಾಸಕ ಗೋಪಾಲಕೃಷ್ಣ ಬೇಳೂರು ಶಿಕ್ಷಕ ಸಮೂಹದ ಬೇಷರತ್ತು ಕ್ಷಮೆಯಾಚನೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದ್ದಾರೆ.

ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಕ್ಷಕ ಸಮೂಹ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಕೇಂದ್ರ ಸರ್ಕಾರದ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 82 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದಾರೆ. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಕೂಡ್ಲಿಗೆಯಲ್ಲಿ ಶಿಕ್ಷಕ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಂಸದರು, ಶಾಸಕರು ಶಿಕ್ಷಕ ದಿನಾಚರಣೆ ಉದ್ಘಾಟಿಸಿದ್ದಾರೆ. ಆದರೆ ಸಾಗರ-ಹೊಸನಗರ ಎರಡೂ ಕಡೆಗಳಲ್ಲಿ ಶಿಕ್ಷಕ ದಿನಾಚರಣೆ ಉದ್ಘಾಟಿಸುವ ಜೊತೆಗೆ ನಿವೃತ್ತ, ಸಾಧಕ ಶಿಕ್ಷಕರನ್ನು ಸನ್ಮಾನಿಸ ಬೇಕಾಗಿದ್ದ ಶಾಸಕರು ಕಸ್ತೂರಿ ರಂಗನ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸಾಗರದಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಸಂಜೆ 4-30ರವರೆಗೂ ನಡೆದಿದ್ದು, ಮಧ್ಯಾಹ್ನ 2 ಗಂಟೆಗೆ ಸಾಗರಕ್ಕೆ ಬಂದರೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಶಿಕ್ಷಕ ಸಮೂಹಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ದೇಶದಲ್ಲಿ ಸತ್ಪçಜೆಗಳನ್ನು ರೂಪಿಸುವ ಹೊಣೆ ಹೊತ್ತು ಅತ್ಯಂತ ನಿಷ್ಟೆಯಿಂದ ಶಿಕ್ಷಕ ಸಮೂಹ ಕೆಲಸ ಮಾಡುತ್ತಿದೆ. ಅವರಿಗೆ ಗೌರವ ಕೊಡುವುದು ಜನಪ್ರತಿನಿಧಿಯಾದವರ ಕರ್ತವ್ಯ. ನಾನಾಗಲೀ, ಕಾಗೋಡು ತಿಮ್ಮಪ್ಪ ಅವರಾಗಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಸಾಗರ ಮತ್ತು ಹೊಸನಗರ ಎರಡೂ ಕಡೆಗಳಲ್ಲಿ ಶಿಕ್ಷಕ ದಿನಾಚರಣೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದೇವು. ಇದು ಕ್ಷೇತ್ರದ ಶಾಸಕನಾದವನ ಆದ್ಯತೆ ಕರ್ತವ್ಯ ಸಹ ಆಗಿರುತ್ತದೆ. ನಾನು ಶಿಕ್ಷಕ ದಿನಾಚರಣೆ ಹಿನ್ನೆಲೆಯಲ್ಲಿ ನನಗೆ ಕಲಿಸಿದ ಗುರುಗಳು ಹರಿಹರದಲ್ಲಿದ್ದಾರೆ. ಅವರನ್ನು ಸನ್ಮಾನಿಸಿದ್ದೇನೆ. ಬೆಂಗಳೂರಿನಲ್ಲಿ ಧರ್ಮಪ್ಪ ಎಂಬ ಶಿಕ್ಷಕರು ಇದ್ದಾರೆ. ಅವರ ಮನೆ ಹುಡುಕಿಕೊಂಡು ಹೋಗಿ ಗೌರವ ಸಲ್ಲಿಸಿ ಬರುವ ಸಂಪ್ರದಾಯ ಉಳಿಸಿ ಕೊಂಡಿದ್ದೇನೆ. ಆದರೆ ಕ್ಷೇತ್ರದಲ್ಲಿದ್ದು ಶಿಕ್ಷಕ ದಿನಾಚರಣೆಯಲ್ಲಿ ಪಾಲ್ಗೊಳ್ಳದ ಶಾಸಕರ ನಡೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ನಾಡಿನ ಜನತೆ ಸಹ ಇದನ್ನು ಖಂಡಿಸಬೇಕು ಎಂದ ಅವರು, ಬಿಜೆಪಿ ಮಹಿಳಾ ತಹಶೀಲ್ದಾರ್‌ಗೆ ಕೆಡಿಪಿ ಸಭೆಯಲ್ಲಿ ಆಗಿರುವ ಅವಮಾನದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದೆ. ಆದರೆ ತಹಶೀಲ್ದಾರ್ ನನಗೆ ಶಾಸಕರು ಏನೂ ಹೇಳಿಲ್ಲ ಎಂದು ಹೇಳಿರುವುದು ಬೇಸರ ತರಿಸಿದೆ. ಇನ್ನು ಅವರ ಮೇಲೆ ಯಾವ ರೀತಿಯ ಒತ್ತಡ ಹಾಕಿದ್ದಾರೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಎಂದರು.

ಗೋಷ್ಟಿಯಲ್ಲಿ ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಶ್ರೀನಿವಾಸ್ ಮೇಸ್ತಿç, ವಿ.,ಮಹೇಶ್, ಸಂತೋಷ್ ಶೇಟ್, ರವೀಂದ್ರ ಬಿ.ಟಿ.,ಪರಶುರಾಮ್, ಅರುಣ ಕುಗ್ವೆ ಇನ್ನಿತರರು ಹಾಜರಿದ್ದರು. 

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನ ಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ