ಹೆಚ್.ಆರ್. ರವಿಕುಮಾರ್ ಅವರು ಶ್ರೀದ್ವಯರ ಆಶೀರ್ವಾದ
ಹೆಚ್.ಆರ್. ರವಿಕುಮಾರ್ ಅವರು ಶ್ರೀದ್ವಯರ ಆಶೀರ್ವಾದ
ಸಾಗರ ; ಸಾಗರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಸಾಗರದ ದೈವಜ್ಞ ಬ್ರಾಹ್ಮಣ ಸಭಾಭವನ ಇಲ್ಲಿ ನಡೆಯುತ್ತಿರು ಶ್ರೀಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ಶ್ರೀ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮಿಗಳವರ ಪರಾಭವ ನಾಮ ಸಂ.ದ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ಟ್ರಸ್ಟಿನ ಪ್ರಧಾನಕಾರ್ಯದರ್ಶಿಗಳು, ಸಾಗರ ಪ್ರಾಂತ್ಯ ಆರ್ಯ-ಈಡಿಗರ ಸಂಘದ ಅಧ್ಯಕ್ಷರು ಆದ ಹೆಚ್.ಆರ್. ರವಿಕುಮಾರ್ ಅವರು ಶ್ರೀದ್ವಯರ ಆಶೀರ್ವಾದ ಪಡೆದರು ಮತ್ತು ಗೌರವವನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಗುರುದ್ವಯರು ಅವರಿಗೆ ಗೌರವ ಅಭಿನಂದನೆ ನೀಡಿದರು.
ಗೌರವ ಅಧ್ಯಕ್ಷರು ಮೋಹನ್ ಶೇಟ್, ಚಾತುರ್ಮಾಸ ಅಧ್ಯಕ್ಷರು ಅರುಣಕುಮಾರ್, ಕಾರ್ಯಾಧ್ಯಕ್ಷರು ಮಂಜುನಾಥ ವರ್ಣೇಕರ್, ಜಗದೀಶ ಕುರ್ಡೇಕರ್, ಸೂರ್ಯನಾರಾಯಣ ಎಸ್. ರಾಯ್ಕರ್, ಮಹಾಬಲೇಶ್ವರ ಶೇಟ್, ಎಂ.ಎಸ್. ಸುರೇಶ, ನಾಗರಾಜ ಶೇಟ್, ಕೃಷ್ಣ ಶೇಟ್, ಅರವಿಂದ ರಾಯ್ಕರ್, ಸಂತೋಷ್ ಆರ್. ಶೇಟ್, ಗುರುರಾಜ ಶೇಟ್, ರಾಘವೇಂದ್ರ ಶೇಟ್ ಹಾಗೂ ಇನ್ನಿತರ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ







Comments
Post a Comment