ದಾಸ ಸಾಹಿತ್ಯದ ಅಧ್ಯಯನ ಅತ್ಯಂತ ಅವಶ್ಯ

ದಾಸ ಸಾಹಿತ್ಯದ ಅಧ್ಯಯನ ಅತ್ಯಂತ ಅವಶ್ಯ

ಸಾಗರ: ಗೃಹಿಣಿಯರು ಮನೆಯಲ್ಲಿ ತಮ್ಮ ದೈನಂದಿನ ಕೆಲಸಗಳ ಜೊತೆಯಲ್ಲಿ ಕೀರ್ತನೆಗಳನ್ನು ಹಾಡಿತ್ತಾ, ಸ್ತೋತ್ರಗಳನ್ನು ಪಠಿಸುತ್ತಾ, ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವವನ್ನು ಪರಿಚಯಿಸುತ್ತಲೇ ಬಂದಿದ್ದಾರೆ ಎಂದು ಸೌರಭ ದಾಸಸಾಹಿತ್ಯ ವಿದ್ಯಾಲಯದ ತಾಲೂಕು ಸಂಚಾಲಕರಾದ ಮಂಜುಳಾ ಬದರೀನಾಥ್‌ ಹೇಳಿದರು.


ಸಾಗರದ ಮಾಧ್ವಸಂಘದಲ್ಲಿ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ 3ನೇ ದಿನವಾದ ಸೋಮವಾರ ಸಮಾಜದ ವತಿಯಿಂದ ʼ ಸೌರಭ ದಾಸಸಾಹಿತ್ಯ ವಿದ್ಯಾಲಯ  ನಡೆಸುವ  ʼದಾಸ ಶಿರೋಮಣಿʼ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಶ್ರೀ ಉತ್ತರಾಧಿಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ದಿವ್ಯ ಆಶೀರ್ವಾದದಲ್ಲಿ ಮುನ್ನಡೆಯುತ್ತಿರುವ ಸೌರಭ ದಾಸಸಾಹಿತ್ಯ ವಿದ್ಯಾಲಯ ನಡೆಸುವ ಪರೀಕ್ಷೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುತ್ತಿದ್ದು, ದಾಸ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಸಾಗರದಲ್ಲಿಯೂ ಪ್ರತೀವರ್ಷ ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದು, 6ಹಂತಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ದಾಸ, ದಾಸಶ್ರೀ, ದಾಸನಿಧಿ, ದಾಸರತ್ನ, ದಾಸ ಶಿರೋಮಣಿ, ದಾಸ ದರ್ಶನ ಎನ್ನುವ ಶಿರೋನಾಮೆಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಸಾಗರದಲ್ಲಿ ಶಾಖೆ ಆರಂಭವಾಗಿ 6ವರ್ಷಗಳಾಗಿದ್ದು, ಈಗಾಗಲೇ 26ಕ್ಕೂ ಹೆಚ್ಚು ಮಹಿಳೆಯರು ಪರೀಕ್ಷೆ ಬರೆದು ವಿವಿಧ ಹಂತಗಳಲ್ಲಿ ಯಶಸ್ವಿಯಾಗಿದ್ದಾರೆ. ಕಲಿಕೆ ಮತ್ತು ಗ್ರಹಿಕೆಗೆ ನಿರಂತರ ಆಸಕ್ತಿ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಈ ವರ್ಷ ಸೌರಭ ದಾಸ ಸಾಹಿತ್ಯ ವಿದ್ಯಾಲಯ ದಶಮಾನೋತ್ಸವನ್ನು ಆಚರಿಸುತ್ತಿದೆ. ಈಗಾಗಲೇ 10 ವರ್ಷಗಳಲ್ಲಿ ಪ್ರಪಂಚದ ವಿವಿದೆಡೆಗಳಿಂದ 50ಸಾವಿರಕ್ಕೂ ಅಧಿಕ ಮಹಿಳೆಯರು ಪರೀಕ್ಷೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿದ್ದಾರೆ.


ಮಾಧ್ವಸಂಘದ ಗೌರವಾಧ್ಯಕ್ಷ ಡಾ.ಗುರುರಾಜ ಕಲ್ಲಾಪುರ್‌ ಮಾತನಾಡಿ ಹರಿದಾಸ ಪಂರಂಪರೆಗೆ ದಾಸವರೇಣ್ಯರು ನೀಡಿದ ಕೊಡುಗೆ ಬಹುದೊಡ್ಡದು. ಬದುಕಿನ ಅರ್ಥವನ್ನು ಅನಾವರಣಗೊಳಿಸುವ ಜೊತೆಯಲ್ಲಿ ಭಕ್ತಿ ಮತ್ತು ಬದುಕಿನ ಸಮನ್ವಯತೆಯನ್ನು ಸಾಧಿಸುವುದು ಹೇಗೆ ಎನ್ನುವುದನ್ನು ದಾಸ ಪರಂಪರೆ ನಮೆಗ ಪರಿಚಯಿಸಿದೆ. ಕನಕದಾಸರು, ಪುರಂದರದಾಸರು, ಜಗನ್ನಾಥದಾಸರು, ವಿಜಯದಾಸರು ಮುಂತಾದ ದಾಸರು ಭಕ್ತಿಪಂಥದ ಮೂಲಕ ಕೀರ್ತನೆಗಳನ್ನು ರಚಿಸಿ ಸಂಗೀತಲೋಕಕ್ಕೂ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಸೌರಭದಾಸಸಾಹಿತ್ಯ ವಿದ್ಯಾಲಯ ನಮ್ಮ ಪರಂಪರೆಯನ್ನು ಪಠ್ಯದ ಮೂಲಕ ಅಭ್ಯಾಸ ಮಾಡಲು ಹೆಣ್ಣು ಮಕ್ಕಳಿಗೆ ಮಾರ್ಗಸೂಚಿಯಾಗಿದೆ. ಸಾಗರದಲ್ಲಿ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಗರದ ಮಾಧ್ವಸಂಘ ಎಲ್ಲಾ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು.

ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ದಾಸಶಿರೋಮಣಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಹರಿಪ್ರಿಯಾ, ಚಂದಿಕಾ ಕಲಘಟಗಿ, ಭಾರತೀ ರಾಮಸ್ವಾಮಿ, ವಾಸುಕಿ ರಾಘವೇಂದ್ರ, ವಿದ್ಯಾವಾದಿರಾಜ, ಶ್ರೀದೇವಿ ಸಿದ್ಧಾಂತಿ, ವಂದನಾ ಕೌಜಲಗಿ, ವೀಣಾ ಕಟ್ಟಿ, ಮಂಜುಳಾ ಬದರೀನಾಥ್‌ ರವರನ್ನು ಸಮಾಜದ ವರಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ವಸಂಘದ ಅಧ್ಯಕ್ಷರಾದ ವೆಂಕಟೇಶ್‌ ಕಟ್ಟಿ, ಮೋಹನ ಅಳಗಂಭಟ್‌, ವಾದಿರಾಜ್‌ ಮಾಸೂರ್‌, ಶ್ರೀಶಾಚಾರ್‌, ಆನಂದ ಕಲ್ಯಾಣಿ, ಬದರೀನಾಥ್‌, ಧೀರೇಂದ್ರ ಕುಲಕರ್ಣಿ, ಶಾಂತಮೂರ್ತಿ, ವಾದಿರಾಜ್‌, ಸುಧಾ ಕೆ.ವಿ, ಸಹನಾ ಕಲ್ಯಾಣಿ ಇತರರು ಹಾಜರಿದ್ದರು.

ಸಾಗರದ ಮಾಧ್ವಸಂಘದಲ್ಲಿ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ 3ನೇ ದಿನವಾದ ಸೋಮವಾರ ಸಮಾಜದ ವತಿಯಿಂದ ʼದಾಸ ಶಿರೋಮಣಿʼ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣದವರನ್ನು ಅಭಿನಂದಿಸಲಾಯಿತು. ಮಾಧ್ವಸಂಘದ ಅಧ್ಯಕ್ಷರಾದ ವೆಂಕಟೇಶ್‌ ಕಟ್ಟಿ, ಡಾ.ಗುರುರಾಜ ಕಲ್ಲಾಪುರ್‌ ಇತರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು - 7204641701

ಮೀನಿನ ಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ