ಸರಕಾರದ ಆದೇಶದಂತೆ ಹೋಟೆಲ್, ಬೇಕರಿಗಳಲ್ಲಿ ಸ್ವಚ್ಚತೆ ನಿರ್ವಹಣೆ ಮಾಡಲು ಸಾಗರ ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್'ನಿಂದ ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಹೆಚ್. ಎನ್. ಉಮೇಶ್ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ
ಸರಕಾರದ ಆದೇಶದಂತೆ ಹೋಟೆಲ್, ಬೇಕರಿಗಳಲ್ಲಿ ಸ್ವಚ್ಚತೆ ನಿರ್ವಹಣೆ ಮಾಡಲು ಸಾಗರ ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್'ನಿಂದ ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಹೆಚ್. ಎನ್. ಉಮೇಶ್ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ
ಸಾಗರ : ಸರ್ಕಾರವು ಆಹಾರ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವ ಸಲುವಾಗಿ ರಾಜ್ಯದಂತ ತಪಾಸಣೆ ಮಾಡುತ್ತಿರುವುದು ಸರಿಯಾಗಿದ್ದು ಮತ್ತು ಶ್ಲಾಘನೀಯ ಕೆಲಸವಾಗಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್. ಎನ್. ಉಮೇಶ್ ಮಧುರ ಹೇಳಿದ್ದಾರೆ.
ಗ್ರಾಹಕರೇ ದೇವರು ಆರೋಗ್ಯವೇ ಭಾಗ್ಯ ನಾವುಗಳು ಹೋಟೆಲ್ನಲ್ಲಿ ತಿಂಡಿ ತಿನಿಸುಗಳಲ್ಲಿ ಶ್ರೇಷ್ಠತೆ ಗುಣಮಟ್ಟ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈಗ ಸರಕಾರಿ ಅಧುಕಾರಿಗಳು ತಪಾಸಣೆ ಮಾಡುತಿದ್ದಾರೆ ಎನ್ನುವುದಕ್ಕೆ ಮಾತ್ರ ನಾವುಗಳು ಜಾಗೃತರಗದೆ ನಮ್ಮ ಎಲ್ಲ ಕಾರ್ಯದ ದಿನಗಳಲ್ಲಿ ನಾವು ಜಾಗೃತ ಹೊಂದಬೇಕು. ಸದಾ ಪ್ರತಿ ದಿನ ಜಾಗೃತಿಯಿಂದ ಇರಬೇಕಾದ್ದು ನಮ್ಮ ಆದ್ಯ ಕರ್ತವ್ಯ ಕಾರಣ ಸಾಗರ ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟಿನ ಮೂಲಕ ನಮ್ಮ ಸದಸ್ಯರುಗಳಿಗೆ ಈ ವಿಚಾರವಾಗಿ ಜಾಗೃತಿ ಮೂಡಿಸಲು ಸ್ವತ ಸಂಘವೇ ತೀರ್ಮಾನ ಮಾಡಿದ್ದು ಸಾಗರದ ಹೋಟೆಲ್ ಮತ್ತು ಬೇಕರಿಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸುವ ಆಂದೋಲನ ಕರೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ವಿಚಾರವಾಗಿ ನಿನ್ನೆ ಸಾಗರ ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷರುಗಳು ಸೇರಿ ಹೋಟೆಲ್ ಮಧುರ, ಜೋಗ ರಸ್ತೆ, ಸಾಗರ ಇಲ್ಲಿಂದ ಚಾಲನೆ ಮಾಡಲಾಗಿದೆ. ಸಾಗರದ ಕೆಲ ಹೋಟೆಲ್ ಮತ್ತು ಬೇಕರಿಗಳಿಗೆ ಹಾಗೂ ಸದಸ್ಯರುಗಳ ಉದ್ಯಮಗಳಿಗೆ ಭೇಟಿಕೊಟ್ಟು ಸರ್ಕಾರದ ನಿಯಮಗಳನ್ನು ನಿಮ್ಮ ದೈನಂದಿನ ವ್ಯವಹಾರದಲ್ಲಿ ಪಾಲಿಸಿ ಸಹಕರಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅವಧಿ ಮೀರಿದ ಆಹಾರ ಪೊಟ್ಟಣಗಳು, ತಂಪು ಪಾನೀಯದ ಬಾಟಲಿಗಳು, ಇತರೆ ಆಹಾರ ಪದಾರ್ಥಗಳು ತ್ಯಾಜ್ಯ ವಸ್ತುಗಳನ್ನು ಕಾಲಕಾಲಕ್ಕೆ ವಿಲೇವಾರಿ ಮಾಡುವುದು ಕುಡಿಯುವ ನೀರಿನ ಗುಣಮಟ್ಟವನ್ನು ಶುಚಿತ್ವದೊಂದಿಗೆ ಕಾಪಾಡುವುದು ಸಂಸ್ಥೆಯಲ್ಲಿ ಗ್ರಾಹಕರು ಕೇಳಿದಲ್ಲಿ ಬಿಸಿ ನೀರನ್ನು ಕುಡಿಯಲು ಕೊಡುವುದು.
ಇನ್ನೂ ಇತ್ಯಾದಿ ವಿವರಗಳನ್ನು ಸಾಗರ ಪ್ರಾಂತ್ಯ ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಟ್ರಸ್ಟ್'ನ ಸದಸ್ಯರುಗಳು ಮನವರಿಕೆ ಮಾಡಿ ಮಾಡಿ ಕೊಟ್ಟಿದ್ದಾರೆ.
ಭೇಟಿ ಸಂಧರ್ಭದಲ್ಲಿ ಅಧ್ಯಕ್ಷ ಕೆ.ಬಿ. ಪ್ರಸಾದ್ ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷರಾದ ಹೆಚ್.ಎನ್. ಉಮೇಶ್ ಕಾರ್ಯದರ್ಶಿಯಾದ ಮಹೇಂದ್ರಶೆಟ್ಟಿ, ನಿರ್ದೇಶಕರುಗಳಾದ ನಾಗರಾಜ ಹಾಗೂ ಗಣಪತಿ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನ ಹೆಜ್ಜೆ ನ್ಯೂಸ್, ಸಾಗರ




Comments
Post a Comment