ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತಕರ ವೇದಿಕೆ (ರಿ) ಕರ್ನಾಟಕ, ಸಾಗರ ತಾಲ್ಲೂಕು ಸಮಿತಿ ಸಾಗರ ಇವರಿಂದ ಗೌರವಾನ್ವಿತ ರಾಜ್ಯಪಾಲರಿಗೆ ಮಾನ್ಯ ತಾಲ್ಲೂಕು ದಂಡಧಾರಿಕಾರಿಗಳ ಮೂಲಕ ಕರ್ನಾಟಕ ರಾಜ್ಯದಲ್ಲಿನ ನೇಮಕಾತಿಗಳಲ್ಲಿ ಅನೇಖ ವರ್ಷಗಳೀಮದ ನಿರಂತವಾಗಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಕರ್ನಾಟಕಲೋಕಸೇವಾ ಆಯೋಗ (KPSC) ದಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಾಮೂಹಿಕ ವರ್ಗಾವಣೆ ಮಾಡುಂತೆ ಕೋರಿ ಮನವಿ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತಕರ ವೇದಿಕೆ (ರಿ) ಕರ್ನಾಟಕ, ಸಾಗರ ತಾಲ್ಲೂಕು ಸಮಿತಿ ಸಾಗರ ಇವರಿಂದ ಗೌರವಾನ್ವಿತ ರಾಜ್ಯಪಾಲರಿಗೆ ಮಾನ್ಯ ತಾಲ್ಲೂಕು ದಂಡಧಾರಿಕಾರಿಗಳ ಮೂಲಕ ಕರ್ನಾಟಕ ರಾಜ್ಯದಲ್ಲಿನ ನೇಮಕಾತಿಗಳಲ್ಲಿ ಅನೇಖ ವರ್ಷಗಳೀಮದ ನಿರಂತವಾಗಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಕರ್ನಾಟಕಲೋಕಸೇವಾ ಆಯೋಗ (KPSC) ದಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಾಮೂಹಿಕ ವರ್ಗಾವಣೆ ಮಾಡುಂತೆ ಕೋರಿ ಮನವಿ


ಸಾಗರ : 2004 ನೇ ಸಾಲಿನಲ್ಲಿ ನಡೆದ ಕೆ.ಎ.ಎಸ್ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕಾದ ಸ್ಥಾನಗಳು ಲಂಚದ ಮೂಲಕ ಬೇರೆಯವರಿಗೆ ಹಂಚಿಕೆಯಾಗಿವೆ ಎಂದು ನ್ಯಾಯಲಯದಲ್ಲಿ ದೂರುಗಳು ದಾಖಲಾದವು.

2008 ನೇ ಸಾಲಿನಲ್ಲಿ ನೇಮಕಾತಿ ವಿವಾದ ಗ್ರೂಫ್ ಮತ್ತು ಗ್ರೂಫ್-ಬಿ ಹುದ್ದೆಗಳ ಜೊತೆಗೆ ಕೆ.ಎಸ್ ನೇಮಕಾತಿಯಲ್ಲೂ ವ್ಯಾಪಕ ಅವ್ಯವಹಾರ ನಡೆದಿದೆ ಎಂಬ ಆರೋಪವಿತ್ತ ಮತ್ತು ಸಂದರ್ಶನ ಸಂದರ್ಭದಲ್ಲಿ ಅಂಕಗಳನ್ನ ಮನಬಂದಂತೆ ನೀಡಿ ಅಕ್ರಮ ವೆಸಗಲಾಗಿತ್ತು ಎಂಬ ಗಂಭೀರ ಆರೋಪ ರುಜುವಾತು ಹಂತಕ್ಕೆ ತಲುಪಿತ್ತು ಎಂಬ ಆರೋಪಗಳು ಕೇಳಿ ಬಂದವು.

2011 ರ ಅತಿ ದೊಡ್ಡ ಹಗರಣವಾದ ಗೆಜಟೆಡ್ ಪ್ರೊಫೆಷನರ್(KAS) ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಲಂಚ ಪಡೆದು ಅಕ್ರಮ ನಡೆಸಲಾಗಿದೆ ಎಂಬ ಆರೋಪ ರುಜುವಾತುತು ಆಗುವ ಹಂತಕ್ಕೆ ತಲುಪಿತು ಈ ಹಗರಣದ ಬಗ್ಗೆ, ಸಿ.ಐ.ಡಿ ಯಿಂದ ತನಿಖೆ ನಡೆಯಿತು ಈ ನೇಮಕಾತಿಯಲ್ಲಿ ಆಕೆಯಾಗಿದ್ದ ಕೆ.ಪಿ.ಎಸ್.ಸಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ಕಾನೂನು ಕ್ರಮ ಮತ್ತು ಪ್ರಾಸಿಕ್ಯೂಷನ್ ಅನುಮತಿಗೆ ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಮುಂದಾದವು.

ಪಟ್ಟಿ ರದ್ದು ಮತ್ತು ಕಾನೂನು ಹೋರಾಟ:ಯಾಕೆ ಪಟ್ಟಿಯನ್ನು ಹೈ ಕೋರ್ಟ್ ಹಾಗೂ ಸರ್ಕಾರ ರದ್ದು ಪಡಿಸಿತ್ತಾದರೂ ನಂತರ ಕರ್ನಾಟಕ ಆಡಳಿತ್ಮಾಕ ನ್ಯಾಯ ಮಂಡಳಿ (KAT) ಮತ್ತು ಹಂತ ಹಂತವಾಗಿ ನಡೆದ ಕಾನೂನು ಪ್ರಕ್ರಿಯೆ ಹಾಗೂ ಸರ್ಕಾರ ತೀರ ತನಿಕೆ ಮೂಲಕ 2017 ಮತ್ತು 2022 ರಲಲಿ ಈ ಆಯ್ಕೆ ಪಟ್ಟಿಯನ್ನು ಅಂತಿಮವಾಗಿ ಉರ್ಜಿತಗೊಳಿಸಿ ಆದೇಶಿಸಲಾಯಿತು 2025 ರಲ್ಲಿ ಸಂಪುಟ ಸಭೆಯ ಅಂದಿನ ಅಧಿಕಾರಿಗಳ ಮೇಲಿನ ಪ್ರಾಸಿಕ್ಯೂಷನ್ ಪ್ರಸ್ತಾಪವನ್ನ ತಿರಸ್ಕರಿಸಿತು ಇಂತಹ ಸಂವಿಧಾನ ಬಾಹಿರ ತೀರ್ಮಾನಗಳಿಂದ ಕೇಸ್ ನಲ್ಲಲಿ ಅನರ್ಹರಾದವರು ಇಂದು ಐ ಎ ಎಸ್ ಅಧಿಕಾರಿಗಳಾಗಿ ಪ್ರಮೋಷನ್ ಪಡೆದು ಭ್ರಷ್ಟಾಚಾರಾದಲದಲ್ಲಿ ಮುಳುಗಿದ್ದಾರೆ.

ಇತ್ತಿಚಿನ ಪಶು ವೈಧ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ (2026) ಇ.ಡಿದಾಳಿ :ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಒ.ಎಂ.ಆರ್ ಉತ್ತರ ಪತ್ರಿಕೆ ತಿದ್ದುವಿಕೆ ಪ್ರೆಶ್ನೆ ಪತ್ರಿಕೆ ಸೋರಿಕೆ ಹಾಗೂ ಲಂಚದ ಆರೋಪಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ಧೇಶನಾಲಯ ಕೆ.ಪಿ .ಎಸ್ .ಸಿ ಕಛೇರಿ ಹಾಗೂ ಪ್ರಮುಖ ಅಧಿಕಾರಿಗಳ ಮೇಲೆ ದಾಳಿ ನಡೆಸಿ ತನಿಖೆ ಮುಂದುವರಿಸಿದೆ.

ಕೆ.ಪಿ.ಎಸ್.ಸಿ ಅಧ್ಯಕ್ಷರಾದ ಶಿವಶಂಕರಪ್ಪ ಎಸ್ ಸಾಹುಕಾರ್ ವಿರುದು ಕೇಳಿ ಬಂದಿರುವ ಆರೋಪಗಳು ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಹೀಗೆ ನಿರಂತವಾಗಿ ಭ್ರಷ್ಟಾಚಾರದಲ್ಲಿ ನಿರತರಾಗಿರುವ ಸಂಸ್ಥೆಯಲ್ಲಿ ಎಲ್ಲಾ ಪ್ರಕರಣಗಳಿಗೆ ಕೇವಲ ಅಧ್ಯಕ್ಷರನ್ನು ಪದಚುತಿಗೊಳಿಸಿದರೆಸಾಲದು ಕ್ಯಾನ್ಸರ್ ಕಾಯಿಲೆಯಂತೆ ಈಭ್ರಷ್ಟಾವಾರಕ್ಕೆ ಹೊಂದಿಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಾಮೂಹಿಕ ವರ್ಗಾವಣೆ (ಕ್ಯಾನ್ಸರ್ ಕಾಯಿಲೆ ಆಪರೇಷನ್ ಮಾಡಿ ಗುಣಪಡಿಸುವಂತೆ) ಸಂಪೂರ್ಣ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುನ್ನುಡಿ ಬರೆದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುವವಂತೆ ಇಂದು ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳವರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂಧರ್ಭದಲ್ಲಿ ಕುಮಾರ, ರವಿಕುಮಾರ್ ಬೆಳೆಯೂರು, ದೀಪಕ್ ಮರೂರು ವಿಷಯದ ಕುರಿತು ಮಾತನಾಡಿದರು.

ಉಮಾ ಮನವಿಯನ್ನು ಓದಿದರು.

ಬಂಗಾರಪ್ಪ ಬೆಳಲಮಕ್ಕಿ, ಸಂತೋಷ ಎಂ., ವೆಂಕಟೇಶ್ ಮಾಸ್ಟರ್, ಗೋವರ್ಧನ, ಮಂಜುನಾಥ ಬಿ. ಆರ್., ಸಂತೋಷ್ ಕೆ. ಜಿ., ಶಿವಕುಮಾರ್ ಪಡವಾಗೋಡು, ನಾಗರಾಜ್ ಮಂಜಿನಕಾನು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ