ಮಹಿಳಾ ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಅಮಾನಿಸಿರುವ ಘಟನೆ ಖಂಡನೀಯ-M.B. ಮಂಜಪ್ಪ ಹಿರೇನಲ್ಲೂರು
ಮಹಿಳಾ ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಅಮಾನಿಸಿರುವ ಘಟನೆ ಖಂಡನೀಯ-M.B. ಮಂಜಪ್ಪ ಹಿರೇನಲ್ಲೂರು
ಸಾಗರ : ಕೆಡಿಪಿ ಸಭೆಯಲ್ಲಿ ಮಹಿಳಾ ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಅಮಾನಿಸಿರುವ ಘಟನೆ ಖಂಡನೀಯ. ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ತಹಶೀಲ್ದಾರ್ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವಮಾನಿಸಿದ್ದು ಸರಿಯಲ್ಲ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮAಜಪ್ಪ ಹಿರೇನೆಲ್ಲೂರು ತಿಳಿಸಿದರು.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿಗೆ ಅನೇಕ ವರ್ಷಗಳ ನಂತರ ಓರ್ವ ದಕ್ಷ ತಹಶೀಲ್ದಾರ್ ಬಂದಿದ್ದಾರೆ. ಅವರ ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕೆ ಹೊರತು ಅವರನ್ನು ಅಧಿಕಾರಿಗಳ ಸಭೆಯಲ್ಲಿ ತಲೆತಗ್ಗಿಸುವಂತೆ ಮಾಡುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ಅಕ್ರಮ ಕಲ್ಲುಕ್ವಾರೆ, ಸರ್ಕಾರಿ ಜಾಗ ಒತ್ತುವರಿ, ಅರಣ್ಯಭೂಮಿ ಕಬಳಿಕೆ ಇನ್ನಿತರೆ ಕುರಿತು ದೂರು ನೀಡಿದಾಗ ತಹಶೀಲ್ದಾರ್ ಡಾ. ಪ್ರತಿಭಾ ಮುಲಾಜಿಲ್ಲದೆ ದಾಳಿ ನಡೆಸಿ ಕಾನೂನುಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಯಾವನೋ ಹೇಳಿದ್ದಾನೆ ಎಂದು ದಾಳಿ ಮಾಡುತ್ತೀರಿ, ಮೀಡಿಯಾ ಇರಿಸಿಕೊಂಡು ಹೋಗಿ ಪ್ರಚಾರ ಪಡೆಯುತ್ತೀರಿ ಎಂದು ಶಾಸಕರು ಹೇಳುವುದು ಎಷ್ಟು ಸರಿ. ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನಾನೇ ಅಕ್ರಮಗಳ ಬಗ್ಗೆ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದೇನೆ. ಹಾಗಾದರೆ ನನ್ನನ್ನು ಶಾಸಕರು ಯಾವನೋ ಎಂದು ಸಂಭೋದಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು,bಅಕ್ರಮ ನಡೆಯುತ್ತಿದ್ದಾಗ ಸಹಜವಾಗಿ ಪತ್ರಕರ್ತರು ಹುಡುಕಿಕೊಂಡು ಹೋಗಿಸುದ್ದಿ ಮಾಡುತ್ತಾರೆ. ಶಾಸಕರು ಅದನ್ನು ನಿರ್ಬಂಧಿಸುವ ರೀತಿಯಲ್ಲಿ ತಹಶೀಲ್ದಾರ್‌ಗೆ ತಾಕೀತು ಮಾಡಿದ್ದು ಸರಿಯಲ್ಲ. ಒಳ್ಳೆಯ ಕೆಲಸ ಮಾಡುತ್ತೀರಿ ಎಂದು ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದೇನೆ ಎಂದು ಹೇಳುವ ಶಾಸಕರೇ, ಮಹಿಳಾ ಅಧಿಕಾರಿ ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆಯೆ ಎಂದು ಪ್ರಶ್ನಿಸಿ, ತಕ್ಷಣ ಶಾಸಕರು ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು ಎಂದರು.
ಕಸ್ತೂರಿ ರಂಗನ್ ವರದಿ ವಿರುದ್ದ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳಿಗೆ ಮನವಿ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಸಂಸತ್‌ನಲ್ಲಿ ಮಾತನಾಡಲು ಬಿ.ವೈ.ರಾಘವೇಂದ್ರ ಅವರನ್ನು, ವಿಧಾನಸಭೆಯಲ್ಲಿ ಮಾತನಾಡಲು ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಅಲ್ಲಿ ಜನಪ್ರತಿನಿಧಿಗಳು ನಮ್ಮ ಧ್ವನಿಯಾಗಬೇಕು. ಕೇರಳ ಮಾದರಿ ಎಂದು ಹೇಳಿ ಇನ್ನೊಂದಿಷ್ಟು ಆತಂಕ ತAದುಕೊಳ್ಳುವುದಕ್ಕಿAತ ವಾಸ್ತವತೆಯನ್ನು ಸಮೀಕ್ಷೆ ನಡೆಸಲು ಒತ್ತಾಯ ಮಾಡಬೇಕು ಎಂದರು.
ಗೋಷ್ಟಿಯಲ್ಲಿ ದೇವು ಆಲಳ್ಳಿ ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು- 6204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment